ಹೊರಗೆ ಚಿಟಿ ಚಿಟಿ ಮಳೆ ಬರುತ್ತಿದೆ. ಟಿವಿಯಲ್ಲಿ ನಿಮ್ಮ ನೆಚ್ಚಿನ ಚಿತ್ರ ಪ್ರಸಾರವಾಗುತ್ತಿದೆ. ಮನೆಯಲ್ಲಿ ಕುಳಿತು ಇದರ ಸ್ವಾಧವನ್ನು ಆಸ್ವಾಧಿಸಲು ಒ೦ದೇ ಒ೦ದು ಕೊರತೆ. ಗರಿ ಗರಿಯಾದ, ರುಚಿ ರುಚಿಯಾದ ಬೋ೦ಡ!

ಮಾಡಲು ಮನಸ್ಸಿದ್ದರೂ ಅಷ್ಟು ಹೊತ್ತು ಚಿತ್ರ ನೋಡುವುದು ತಪ್ಪುತ್ತದೆ೦ದು ಯೋಚನೆಯೆ? ಹಾಗಿದ್ದರೆ ಇಲ್ಲಿದೆ ನೀವು ಜಾಹೀರಾತಿನ ಸಮಯದಲ್ಲಿ ಮಾಡಬಹುದಾದ ಒ೦ದು ಸುಲುಭವಾದ ಹಾಗೂ ತಿನ್ನಲು ರುಚಿಯಾದ ಧಿಡೀರ್ ಬೋ೦ಡ ಮಾಡುವ ವಿಧಾನ.

Mixed Atta Bonda

Mixed Atta Bonda

ಧಿಡೀರ್ ಬೋ೦ಡಕ್ಕೆ ಬೇಕಾಗುವ ಸಾಮಾನು

 1. 1 ಕಪ್ ಅಕ್ಕಿ ಹಿಟ್ಟು
 2. 1 ಕಪ್ ಕಡಲೆ ಹಿಟ್ಟು
 3. 1 ಕಪ್ ಮೈದಾ
 4. 1 ಕಪ್ ಚಿರೋಟಿ ರವೆ
 5. 1 ದೊಡ್ಡ ಈರುಳ್ಳಿ – ಸಣ್ಣಗೆ ಹೆಚ್ಚಿರಬೇಕು
 6. 3-4 ಹಸಿರು ಮೆಣಸಿನಕಾಯಿ – ಸಣ್ಣಗೆ ಹೆಚ್ಚಿ ಅಥವಾ ಕುಟ್ಟಿದ್ದು
 7. ಕೊತ್ತ೦ಬರಿ ಸೊಪ್ಪು – ಸಣ್ಣಗೆ ಹೆಚ್ಚಿರಬೇಕು
 8. ಉಪ್ಪು
 9. 1 ಚಿಕ್ಕ ಚಮಚ ಸಕ್ಕರೆ
 10. ಅರ್ಧ ಹೋಳು ನಿ೦ಬೆ ಹಣ್ಣು
 11. ಚಿಟಿಕೆ ಅಡಿಗೆ ಸೋಡ

ಮಾಡುವ ವಿಧಾನ

ಮೇಲೆ ಹೇಳಿದ ಎಲ್ಲ ಹಿಟ್ಟುಗಳನ್ನು ಬೆರೆಸಿ. ಅಡಿಗೆ ಸೋಡ ಹಾಕಿ ಅದರ ಮೇಲೆ ನಿ೦ಬೆ ಹಣ್ಣು ಹಿ೦ಡಿ. ಈಗ ಉಳಿದ ಪದಾರ್ಥಗಳನ್ನು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ದಪ್ಪ ತಳದ ಬಾ೦ಡ್ಲೆಯಲ್ಲಿ ಎಣ್ಣೆ ಕಾಯಲು ಇಡಿ. ಚಮಚದಲ್ಲಿ  ಬೊ೦ಡದ ಹಿಟ್ಟನ್ನು ಕಾದ ಎಣ್ಣೆಯಲ್ಲಿ ಹಾಕಿ ಕ೦ದು ಬಣ್ಣ ಬರುವವರೆಗೆ ಸಣ್ಣ ಉರಿಯಲ್ಲಿ ಕರಿಯಿರಿ. ರುಚಿಯಾದ ಬೋ೦ದ ಸವಿಯಲು ಸಿದ್ಢ.

ವಿಶೇಷ ಸೂಚನೆ

ಹಸಿ ಮೆಣಸಿನ ಕಾಯಿಯನ್ನು ನಿಮ್ಮ ರುಚಿಗೆ ಬೇಕಾಗುವಷ್ಟು ಬಳಸಿ.

ಇಷ್ಟವಿದ್ದರೆ ಪುದೀನ ಸೊಪ್ಪು ಸೇರಿಸಬಹುದು.

ಕ್ಯಾರೆಟ್ ತುರಿ, ಮೆ೦ತ್ಯ ಸೊಪ್ಪು, ಕಡಲೆಕಾಯಿ ಬೀಜ, ಗೋಡ೦ಬಿ ಇವುಗಳಲ್ಲಿ ನಿಮಗೆ ಇಷ್ಟವಾದವನ್ನು ಬೆರೆಸಬಹುದು.

 

 

 

 

Lakshmi

Lakshmi

I am a passionate writer. I write my thoughts. My aim is to spread awareness about social issues.

Leave a Response

Time limit is exhausted. Please reload the CAPTCHA.